Swaastiya Rasa

Banana Pseudo Stem Juic

 ಉಗುರು ತಿನ್ನುವ ಅಭ್ಯಾಸ ಇರುವವರು ಮತ್ತು ಹೊಟ್ಟೆ ನೋವು ಮಲಬದ್ಧತೆ ಹೊಟ್ಟೆಯಲ್ಲಿನ ವಿಷಕಾರಿ ಪದಾರ್ಥ ಮತ್ತು ಕೂದಲು ಸೇರಿಕೊಂಡಿದ್ದರೆ ಎಲ್ಲವನ್ನು ಶುದ್ಧ ಮಾಡಲು ಸಹಾಯ ಮಾಡುತ್ತದೆ


ಅತಿಯಾದ ಹುಳಿತೇಗು ಬಾಯಿಯಲ್ಲಿ ನೀರೂರುವುದು, ಎಷ್ಟೇ ನೀರು ಕುಡಿದರೂ ಶಮನವಾಗದ ಹೊಟ್ಟೆಯುರಿ, ಹೊಟ್ಟೆ ಹಸಿವಾಗದೆ ಇರುವುದು ಮತ್ತು ಎದೆಯಲ್ಲಿ ಸದಾ ಒತ್ತಿದಂತೆ ಆಗುವುದು ಗ್ಯಾಸ್ಟ್ರಿಕ್ ಸಮಸ್ಯೆಯ ಬಹುಮುಖ್ಯ ಲಕ್ಷಣಗಳು. 30 ಮಿಲಿ ಬಾಳೆದಿಂಡಿನ ರಸವನ್ನು ಅಷ್ಟೇ ಪ್ರಮಾಣದ ನೀರನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಎದೆಯುರಿ ಹೊಟ್ಟೆ ಉರಿ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ಬಗೆಹರಿಸುತ್ತದೆ.


 ಬಾಳೆದಿಂಡಿನ ರಸದಲ್ಲಿ  ಕಬ್ಬಿಣ ಮತ್ತು ವಿಟಮಿನ್ ‘ಬಿ6’ಅಂಶ ಇರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶದ ಮಟ್ಟವನ್ನು ಹೆಚ್ಚು ಮಾಡುತ್ತದೆ ಮತ್ತು ಆದ್ದರಿಂದ ಇದು ಅನಿಮಿಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಸಹಾಯ ಮಾಡುತ್ತದೆ.

 ಈ ರಸವನ್ನು 50 ಮಿಲಿಗೆ 50 ಮಿಲಿ ನೀರಿನೊಂದಿಗೆ ಒಂದು ತಿಂಗಳು ತೆಗೆದುಕೊಂಡರೆ ಸಣ್ಣ ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಿ ನೋವು ಕಾಣಿಸಿಕೊಂಡರೆ ಬಾಳೆದಿಂಡಿನ ರಸ ಉತ್ತಮ ಹಾಗೂ ಶೀಘ್ರವಾಗಿ ಪರಿಣಾಮವನ್ನು ನೀಡುತ್ತದೆ.


ವಿಟಮಿನ್ ‘ಕೆ’ ಕೊರತೆಯಿಂದ ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಬಾಳೆದಿಂಡಿನ ಜ್ಯೂಸ್ ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುವ ಕ್ಷಮತೆ ಹೆಚ್ಚುತ್ತದೆ.


ಬಾಳೆ ದಿಂಡಿನ ರಸ ದಲ್ಲಿರುವ ಲೆಕ್ಟಿನ್, ಇನ್ಸುಲಿನ್ ತರಹದ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದಲ್ಲದೆ, ಕಡಿಮೆ ಗ್ಲೆಸಿಮಿಕ್ ಸೂಚ್ಯಂಕದಿಂದಾಗಿ ಬಾಳೆದಿಂಡಿನ ರಸ ಮಧುಮೇಹ ರೋಗಿಗಳಲ್ಲಿ ಬಳಕೆಗೆ ಹೆಚ್ಚು ಸೂಕ್ತವಾಗಿದೆ.


ಬಾಳೆದಿಂಡಿನ ರಸವು ಮಾನವ ದೇಹದಲ್ಲಿನ ಆಮ್ಲೀಯ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಅವುಗಳನ್ನು ಸಮತೋಲಗೊಳಿಸುತ್ತದೆ.
ಪರಿಣಾಮವಾಗಿ,ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಎದೆಯುರಿ
ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

 
ಬಾಳೆದಿಂಡಿನ ರಸದಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ರಕ್ತದೊತ್ತಡದ ಏರಿಳಿತಗಳನ್ನು
ಎದುರಿಸಲು ಹೆಸರುವಾಸಿಯಾದ ಖನಿಜವಾಗಿದೆ. ಆದ್ದರಿಂದ, ಬಾಳೆದಿಂಡಿನ ರಸದ ನಿಯಮಿತ ಸೇವನೆಯು ಅಧಿಕ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು
ಸಹಾಯ ಮಾಡುತ್ತದೆ ಮತ್ತು ಹೃದಯ ನಾಳದ ಅಸ್ವಸ್ಥತೆಯ ಅಪಾಯ ಕಡಿಮೆ ಮಾಡುತ್ತದೆ.


ಸಾಮಾನ್ಯವಾಗಿ ಮಹಿಳೆಯರಲ್ಲಿ ಯೋನಿ ಸೋಂಕು ಮುಖ್ಯವಾಗಿ
ಜೀರ್ಣಾಂಗದಲ್ಲಿ ಹುಟ್ಟುವ ರೋಗಕಾರಕಗಳಿಂದ ಉಂಟಾಗುತ್ತದೆ. ಬಾಳೆದಿಂಡಿನ ರಸವನ್ನು ನಿಯಮಿತವಾಗಿ ದಿನವೂ ಸೇವಿಸುವುದರಿಂದ
ಮೂತ್ರನಾಳದ ಸೋಂಕನ್ನು ತಡೆಯಬಹುದು.